ಸಂತೋಷ ಸುಸೈಡ್ ಮಾಡಿಕೊಂಡಿದ್ದು ಪೋಲೀಸರಿಂದನಾ…?ಅವನ ಪತ್ನಿ ಮಕ್ಕಳಿಂದನಾ..?
ಹುಬ್ಬಳ್ಳಿ:-ಪ್ರೀತಿಸಿ ಮದುವೆಯಾಗಿ ಹದಿನೆಂಟು ವರ್ಷದ ದಾಂಪತ್ಯ ಜೀವನಕ್ಕೆ ಪತ್ನಿಯೇ ಪತಿಗೆ ತಿಲಾಂಜಲಿ ಇಟ್ಟಳಂತೆ.ಅಂತಹದೊಂದು ಘಟನೆ ಹುಬ್ಬಳ್ಳಿಯ ಬೆಂಗೇರಿಯ ಹರಿಜನ ಕಾಲೋನಿಯಲ್ಲಿ ನಡೆದಿದೆ..
ಹುಬ್ಬಳ್ಳಿಯ ಬೆಂಗೇರಿಯ ಹರಿಜನ ಕಾಲೋನಿಯಲ್ಲಿ ವಾಸವಿದ್ದ ಸಂತೋಷ ಅಳ್ಳೂರ ಹಾಗೂ ಆತನ ಪತ್ನಿ ಲಲಿತಾಳ ಮದ್ಯ ಬಂದಿದ್ದೇ ಮೊಬೈಲ್. ಈ ಮೋಬೈಲ್ ವಿಚಾರ ಈಗ ಪತಿ ಸಂತೋಷನ ಜೀವಕ್ಕೆ ಸಂಚಕಾರ ತಂದಿದೆ.ಪತಿಯ ಜೊತೆ ಪತ್ನಿ ಸರಿಯಾಗಿ ಮಾತನಾಡದ ಹಿನ್ನೆಲೆಯಲ್ಲಿ ಅವರಿಬ್ಬರಲ್ಲಿ ಜಗಳ ಆರಂಭವಾಗಿ ಕೊನೆಗೆ ಪೋಲೀಸ ಠಾಣೆಯ ಮೆಟ್ಟಿಲು ಏರಿತ್ತು.ಪೋಲೀಸರು ಮತ್ತು ಪತ್ನಿ ಮಕ್ಕಳ ಕಿರುಕುಳದಿಂದ ಸಂತೊಷ ಸುಸೈಡ್ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಅಲ್ಲದೇ ಹುಬ್ಬಳ್ಳಿಯ ಮಹಿಳಾ ಪೋಲೀಸ ಠಾಣೆಯಲ್ಲಿಯೇ ಪೋಲೀಸರೆದುರಿಗೇ ಪತ್ನಿ ಪತಿಯನ್ನು ಹೊಡೆದರೂ ಪೋಲೀಸರು ಸುಮ್ಮನಿದ್ದರು.ಅಲ್ಲದೇ ಪೋಲೀಸರೂ ಸಹ ಸಂತೋಷನನ್ನು ಕೂದಲು ಹಿಡಿದು ಗೋಡೆಗೆ ಗುದ್ದಿದ್ದಾರೆ.ಅಲ್ಲದೇ ಹೊಡೆದು ಅವನಿಗೆ ಧಮ್ಕಿ ಹಾಕಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.