ಎಸಿಪಿ ಚಾಜ್೯ ತೆಗೆದುಕೊಂಡ ವಾರದಲ್ಲೇ ಪರಾರಿಯಾಗಿದ್ದ ಆರೋಪಿ ಲಾಕ್…. ಸಿನಿಮಾ ಸ್ಟೈಲನಲ್ಲಿ ಆರೋಪಿ ಹಿಡಿದ “ಮೂರು” ಹೀರೋಗಳು…

Share to all

ಎಸಿಪಿ ಚಾಜ್೯ ತೆಗೆದುಕೊಂಡ ವಾರದಲ್ಲೇ ಪರಾರಿಯಾಗಿದ್ದ ಆರೋಪಿ ಲಾಕ್….
ಸಿನಿಮಾ ಸ್ಟೈಲನಲ್ಲಿ ಆರೋಪಿ ಹಿಡಿದ “ಮೂವರು” ಹೀರೋಗಳು…

ಹುಬ್ಬಳ್ಳಿ:-ಹುಬ್ಬಳ್ಳಿ-ಧಾರವಾಡದ ಪೋಲೀಸರಿಗೆ ಚಾಲೇಂಜ್ ಆಗಿದ್ದ ತಡಸಿನಕೊಪ್ಪದ ಪೈರಿಂಗ್ ಪ್ರಕರಣದ ಮೇನ್ ಆರೋಪಿ ಸುಂದರಪೌಲನನ್ನು ಲಾಕ್ ಮಾಡುವಲ್ಲಿ ಧಾರವಾಡ ಎಸಿಪಿ ಶಿವಪ್ರಕಾಶ ನಾಯಕ ನೇತೃತ್ವದಲ್ಲಿ ಮೂವರು ಪಿಎಸ್ ಐ ಗಳು ಆರೋಪಿಯನ್ನು ಲಾಕ್ ಮಾಡಿದ್ದಾರೆ…

ಪೈರಿಂಗ್ ಪ್ರಕರಣದ ಆರೋಪಿ ಪತ್ತೆಗಾಗಿ ಕಮೀಷನರ್ ಎನ್ ಶಶಿಕುಮಾರ ಅವರು ಎಸಿಪಿ ಶಿವಪ್ರಕಾಶ ನಾಯಕ ಅವರಿಗೆ ಸೂಚನೆ ನೀಡಿದ್ದರು..ಅವರ ಹಾಗೂ ಕಮೀಷನರ ಮಾರ್ಗದರ್ಶನದಂತೆ ಪಿಎಸ್ಐ ಶ್ರೀಮಂತ ಹುಣಸಿಕಟ್ಟಿ..ಸಾತಣ್ಣವರ..ರೂಪಕ ಅವರು ಆರೋಪಿ ಹಿಡಿದು ತರುವಲ್ಲಿ ಯಶಸ್ವಿಯಾಗಿದ್ದಾರೆ…

ಸುಮಾರು ಏಳನೂರು ಕಿಲೋಮೀಟರ ದೂರದ ತಮಿಳನಾಡು ನಾಗಪಟ್ಟಣದ ಸಮುದ್ರ ತೀರದಲ್ಲಿದ್ದ ಸುಂದರಪೌಲನನ್ನು ಸಿನಿಮೀ ಸ್ಟೈಲನಲ್ಲಿ ಆರೋಪಿಯನ್ನು ಆ ಎರಡು ಸ್ಟಾರನ ಮೂರು ಹೀರೋಗಳು ಎತ್ತಾಕೊಂಡು ಹುಬ್ಬಳ್ಳಿಗೆ ಬಂದಿದ್ದಾರೆ..

ಆರೋಪಿಗೆ ದಯೆ ತೋರಿದ್ದ ದಯಾಮಯಿ ಮಾತ್ರ ಕಳೆದ ಹದಿನೈದು ದಿನದಿಂದ ಹೈದ್ರಾಬಾದ್.. ನೇಪಾಳ ಸೇರಿದಂತೆ ಹಲವು ಕಡೆ ಪ್ರವಾಸ ಮಾಡಿ ಬರಿಗೈಯಲ್ಲಿ ಧಾರವಾಡಕ್ಕೆ ಬಂದಿದ್ದಾರೆ.ಇವರು ಆರೋಪಿ ಹಿಡಿಯೋದಿಲ್ಲಾ ಅಂತಾ ಗೊತ್ತಾಗಿದ್ದಕ್ಕೆ ಯಾರಿಗೂ ಗೊತ್ತಾಗದಂತೆ ಇನ್ನೊಂದು ಕಡೆ ಮೂವರು ಹೀರೋಗಳನ್ನು ಕಳಿಸಿಕೊಟ್ಟಿದ್ದರು ಎನ್ನಲಾಗಿದೆ.

ಉದಯ ವಾರ್ತೆ
ಧಾರವಾಡ


Share to all

You May Also Like

More From Author