ಮೂರಂಕಿ” ಆಟಕ್ಕೆ “ಲೈಪೇ” ಬೇಡ ಅಂದ ಯುವಕ.. ಡೆತ್ ನೋಟ್ ಮುಚ್ಚಿಟ್ಟವರು ಯಾರು..? ಡೆತ್ ನೋಟನಲ್ಲಿ ಖಾಕಿ…

Share to all

“ಮೂರಂಕಿ” ಆಟಕ್ಕೆ “ಲೈಪೇ” ಬೇಡ ಅಂದ ಯುವಕ.. ಡೆತ್ ನೋಟ್ ಮುಚ್ಚಿಟ್ಟವರು ಯಾರು..?
ಡೆತ್ ನೋಟನಲ್ಲಿ ಖಾಕಿ…

ಹುಬ್ಬಳ್ಳಿ:-“ಮೂರು”ತೊಲೆ ಬಂಗಾರ”ಮೂರು” ತಿಂಗಳ ಹಿಂದೆ ರಾಜೀ ಪಂಚಾಯತಿ…ಮೂರು ದಿನದ ಹಿಂದೆ ಸುಸೈಡ್ ಯತ್ನ…ತಲೆ ಕೆಡಿಸಿದವಳು ಮನೆಯಲ್ಲಿ ತಲೆ ಕೆಟ್ಟವನು ಕಿಮ್ಸ್ ನಲ್ಲಿ…ಏನಿದು ಮೂರಂಕಿ ಆಟ ಅಂತೀರಾ….

ಹೌದು ಹುಬ್ಬಳ್ಳಿಯ ನವನಗರ ಪೋಲೀಸ ಠಾಣಾ ವ್ಯಾಪ್ತಿಯ ಈಶ್ವರ ನಗರದ ಕಿರಣ ಅನ್ನೋ ಯುವಕ ಒಂದು ಹುಡುಗಿಯ ಜೊತೆಗೆ ಒಂದು ವರ್ಷದಿಂದ ಪ್ರೀತಿ ಮಾಡತಿದ್ದನಂತೆ..ಕಳೆದ ಮೂರು ತಿಂಗಳ ಹಿಂದೆ ಅವರಿಬ್ಬರೂ ಮದುವೆ ಆಗೋಣ ಅಂತಾ ಓಡಿ ಹೋಗಿದ್ದರಂತೆ….ಮುಂದೆ ನಡೆದಿದ್ದು ನವನಗರ ಪೋಲೀಸರ ಇನ್ವಾಲಮೆಂಟ್ ಅಂತೆ…

ಮುಂದೆ ಹುಡುಗಿಯ ಪೋಷಕರು ಮಿಸ್ಸಿಂಗ್ ಕಂಪ್ಲೀಟ್ ಅದು ಇದು ನಡೆದು ಅದಕ್ಕೊಂದು ಬಣ್ಣನೂ ಕಟ್ಟಿದ್ದಾಯ್ತು..ಆ ಬಣ್ಣದ ಕಥೆಗೆ ಈಗ ಆ ಹುಡುಗ ಸುಸೈಡ್ ಯತ್ನ ನಡೆಸಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿದ್ದಾನೆ.

ಮೂರು ತಿಂಗಳ ಹಿಂದೆ ಓಡಿ ಹೋದ ಜೋಡಿ ಕರೆತಂದ ಪೋಲೀಸರು ರಾಜೀ ಪಂಚಾಯತಿ ನಡೆಸಿದ್ದರಂತೆ..ಅವತ್ತು ಹುಡುಗ ಮತ್ತು ಹುಡುಗಿಯನ್ನ ಬೇರೆ ಮಾಡಿ ಅವರವರ ಮನೆಗೆ ಕಳಿಸೋ ಜೊತೆಗೆ ಹುಡುಗ ಮೂರು ತೊಲೆ ಬಂಗಾರ ಕೊಡಬೇಕು ಅಂತಾ ಒಪ್ಪಿಗೆ ಪತ್ರನೂ ಬರೆಸಿಕೊಂಡಿದ್ದರಂತೆ.ಅದೇ ಮೂವರು ಪೋಲೀಸರು ಮೂರು ತೊಲೆ ಬಂಗಾರದ ಹಿಂದೆ ಬಿದ್ದಿರೋದೆ ಆ ಹುಡುಗ ಸುಸೈಡ್ ಮಾಡಿಕೊಳ್ಳಲು ಕಾರಣ ಎನ್ನಲಾಗಿದೆ.

ಆ ಮೂರು ತೊಲೆ ಬಂಗಾರ ಹಿಂದೆ ಬಿದ್ದ ಮೂವರು ಯಾರು..? ಡೆತ್ ನೋಟನಲ್ಲಿ ಅವರ ಹೆಸರು ಬರೆದನಾ..? ಆ “Exclusive video” ಗಾಗಿ ವೀಕ್ಷಿಸಿ ನಿಮ್ಮ ಉದಯ ವಾರ್ತೆಯಲ್ಲಿ..

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author