ಅಪರಾಧ ಹಾಗೂ ಅಪರಾಧಿಗಳೊಂದಿಗೆ ಕಮೀಷನರ್ ಪೋಟೋ..ಮುಲಾಜಿ ಇಲ್ಲದೇ ಕ್ರಮ ಕಮೀಷನರ್ ಖಡಕ್ ಎಚ್ಚರಿಕೆ…

Share to all

ಅಪರಾಧ ಹಾಗೂ ಅಪರಾಧಿಗಳೊಂದಿಗೆ ಕಮೀಷನರ್ ಪೋಟೋ..ಮುಲಾಜಿ ಇಲ್ಲದೇ ಕ್ರಮ ಕಮೀಷನರ್ ಖಡಕ್ ಎಚ್ಚರಿಕೆ…

ಹುಬ್ಬಳ್ಳಿ:- ಗಾಂಜಾ ಗಿರಾಕಿ ಹಾಗೂ ಗೌರಿ ಲಂಕೇಶ ಹತ್ಯೆಯ ಆರೋಪಿಯೊಬ್ಬರು ಹುಬ್ಬಳ್ಳಿ-ಧಾರವಡ ಪೋಲೀಸರಿಗೆ ಹೂಗುಚ್ಚ ನೀಡಿ ಸನ್ಮಾನಿಸಿದ ಪೋಟೋ ವೈರಲ್ ಹುಬ್ಬಳ್ಳಿಯಲ್ಲಿ ಸಂಚಲನ ಮೂಡಿಸಿದ್ದವು ಅದಕ್ಕೆ ಸಂಬಂಧಿಸಿದಂತೆ ಪೋಲೀಸ ಕಮೀಷನರ್ ಪತ್ರಿಕಾ ಹೇಳಿಕೆ ನೀಡಿದ್ದಾರೆ..

*ಕಮೀಷನರ್ ಪತ್ರಿಕಾ ಹೇಳಿಕೆ..*

ಕಳೆದ ಎರಡು ದಿನಗಳಲ್ಲಿ ನಾನು ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ 200ಕ್ಕೂ ಹೆಚ್ಚು ನಾಗರಿಕರು ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿ ಶುಭ ಕೋರಿದ್ದಾರೆ. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರಿಂದ, ಅಪರಾಧ ಹಿನ್ನೆಲೆ ಹೊಂದಿರುವ ಕೆಲವು ವ್ಯಕ್ತಿಗಳು ಸಹ ಭೇಟಿ ನೀಡಿ ಛಾಯಾಚಿತ್ರ ತೆಗೆಸಿಕೊಂಡಿರುವುದು ನಂತರ ಗಮನಕ್ಕೆ ಬಂದಿದೆ.

ಅಂತಹ ವ್ಯಕ್ತಿಗಳ ಭೇಟಿ ಅಥವಾ ಅವರೊಂದಿಗೆ ತೆಗೆಸಿಕೊಂಡಿರುವ ಛಾಯಾಚಿತ್ರಗಳನ್ನು ಪೊಲೀಸ್ ಇಲಾಖೆಯೊಂದಿಗಿನ ಅವರ ಯಾವುದೇ ರೀತಿಯ ಸಂಬಂಧವೆಂದು ಅರ್ಥೈಸಬಾರದು.

ಹುಬ್ಬಳ್ಳಿ-ಧಾರವಾಡ ನಗರ ಪೊಲೀಸರು ಅಪರಾಧ ಹಾಗೂ ಅಪರಾಧಿಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ, ನಿಷ್ಪಕ್ಷಪಾತವಾಗಿ ಮತ್ತು ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲು ಬದ್ಧರಾಗಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ..


Share to all

You May Also Like

More From Author