ಅನ್ನಭಾಗ್ಯದ ವಾಹನದಲ್ಲಿ ಗೋದಿ ಸಾಗಾಟ…ತಹಶೀಲ್ದಾರ ಸಾಹೇಬ್ರಿಗೂ ಆಶ್ಚರ್ಯ ತಂದೈತಂತ್ರೀ…ಶಾಸಕರೇ ಎಲ್ಲೀದ್ದೀರಾ…

Share to all

ಅನ್ನಭಾಗ್ಯದ ವಾಹನದಲ್ಲಿ ಗೋದಿ ಸಾಗಾಟ…ತಹಶೀಲ್ದಾರ ಸಾಹೇಬ್ರಿಗೂ ಆಶ್ಚರ್ಯ ತಂದೈತಂತ್ರೀ…ಶಾಸಕರೇ ಎಲ್ಲೀದ್ದೀರಾ…

ಕುಂದಗೋಳ:- ಕಳೆದ ಎರಡು ದಿನದ ಹಿಂದೆ ಅನ್ನಭಾಗ್ಯ ಅಕ್ಕಿ ಸಾಗಾಟ ಮಾಡುತ್ತಿದ್ದ ವಾಹನವನ್ನು ಸಾರ್ವಜನಿಕರೇ ಹಿಡಿದು ಪೋಲೀಸರಿಗೆ ಒಪ್ಪಿಸಿದರೂ ಇನ್ನೂ ದೂರು ದಾಖಲು ಮಾಡದೇ ಪರಿಶೀಲನೆ ಮಾಡತಾ ಇದ್ದಾರಂತೆ ತಹಶೀಲ್ದಾರ ಸಾಹೇಬ್ರು…

ಎರಡು ದಿನದಿಂದ ಅನ್ನಭಾಗ್ಯದ ಗದ್ದಲ ಕುಂದಗೋಳದಲ್ಲಿ ವಾಸನೆ ಹಿಡಿಸಿದರೂ ಶಾಸಕರಿಗೆ ಮಾತ್ರ ಇನ್ನೂ ಅದರ ವಾಸನೆನೆ ಬಡಿದಿಲ್ಲಾ ಅಂತಾ ಕಾಣುತ್ತೆ..ಸಾರ್ವಜನಿಕರು ಹಿಡಿದು ತಂದು ಪೋಲೀಸರಿಗೆ ಒಪ್ಪಿಸಿ ತಪ್ಪಿಸ್ಥರ ಮೇಲೆ ಕಾನೂನು ಕ್ರಮಕೈಕೊಳ್ಳರೀ ಅಂದರೆ ಅಧಿಕಾರಿಗಳು ನೋ ರಿಸ್ಪಾನ್ಸ್..ಪೋಲೀಸರದೂ ನೋ ರಿಸ್ಪಾನ್ಸ್ ಶಾಸಕರೇ ಒಂದೀಟ ಅಕ್ಕಿ ವಾಸನೆ ಏನು ಅಂತಾನಾದರೂ ನೋಡ್ರೆಲ್ಲಾ..

ಇನ್ನೂ ತಹಶೀಲ್ದಾರ ಸಾಹೇಬ್ರಂತೂ ಇನ್ನೂ ಪರಿಶೀಲನೆ ಮಾಡತೇವಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮಕೈಕೊಳ್ಳಲು ಪೋಲೀಸರಿಗೆ ಸೂಚನೆ ಕೊಡತೇನಿ ಅಂತಾ ಹೇಳೋದರ ಜೊತೆಗೆ ಅನ್ನಭಾಗ್ಯದ ಅಕ್ಕಿಯಲ್ಲಿ ಗೋದಿ ಚೀಲಗಳು ಬಂದಿರೋದು ಆಶ್ಚರ್ಯ ತಂದಿದೆ ಅಂತೆ..

ಇನ್ನೂ ಕುಂದಗೋಳದ ಪಿಎಸ್ಐ ಸಾಹೇಬ್ರಂತೂ ನಮಗೇನ್ರೀ ಪುಡ್ ದವರನ್ನ ಕೇಳಿ.ಅವರ ಕಂಪ್ಲೇಟ್ ಕೊಟ್ರೆ ತೆಗೆದುಕೊಳ್ಳತೇವಿ ಇಲ್ಲಾ ಅಂದರೆ ಇಲ್ಲಾ ಅಂತಾ ಹೇಳಿ ಕೈ ತೊಳೆದುಕೊಂಡಿದ್ದಾರೆ..ಹೌದ್ರೀಪಾ ಸಾರ್ವಜನಿಕರು ಗಾಡಿ ಹಿಡಿದ ಕೊಟ್ಟರಲ್ಲಾ ಅವಾಗೆ ಇದು ನಮಗೆ ಸಂಬಂಧಿಸಿದ್ದಲ್ಲಾ…ಪುಡ್ ದವರಗೆ ಕೊಡಿ ಅಂತಾ ಯಾಕೆ ಹೇಳಲಿಲ್ಲಾ ಸಾಹೇಬ್ರೆ..

ಒಟ್ಟಾರೆ ಈ ಅನ್ನಭಾಗ್ಯದ ಪ್ರಕರಣದಲ್ಲಿ ಎಲ್ಲರೂ ಸೇರಿ ಬತ್ತ ಮೊಸರು ಕಲಿಸಿದ್ದಂತೂ ನಿಜ..ಇದು ಇಲ್ಲಿಗೆ ಮುಗಿದಿಲ್ಲಾ ಮುಂದೈತಿ ಮಾರಿ ಹಬ್ಬ..

ಉದಯ ವಾರ್ತೆ


Share to all

You May Also Like

More From Author