ಕೃಷಿ ಮೇಳದಲ್ಲಿ ಕಣ್ಣೀರಿಟ್ಟ ಗಂಗಮ್ಮಳಿಗೆ ವೀರೇಶ ಉಂಡಿ ಆಸರೆ: ನೆರವಿನ ಭರವಸೆ

Share to all

ಕೃಷಿ ಮೇಳದಲ್ಲಿ ಕಣ್ಣೀರಿಟ್ಟ ಗಂಗಮ್ಮಳಿಗೆ ವೀರೇಶ ಉಂಡಿ ಆಸರೆ: ನೆರವಿನ ಭರವಸೆ

 

ಕೃಷಿ ಮೇಳದಲ್ಲಿ ಕಡಲೆಕಾಯಿ ಮಾರಾಟಕ್ಕೆ ಅವಕಾಶ ಸಿಗಲಿಲ್ಲ ಎಂಬ ಕಾರಣಕ್ಕೆ ಕಣ್ಣೀರಿಟ್ಟಿದ್ದ ವೃದ್ಧೆ ಗಂಗಮ್ಮ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಗಮನಿಸಿದ ದುರ್ಗಾ ಡೆವಲಪರ್ಸ್ ಮಾಲೀಕ ವೀರೇಶ ಉಂಡಿ ಅವರು ಗಂಗಮ್ಮ ಅವರನ್ನು ತಮ್ಮ ಕಚೇರಿಗೆ ಕರೆಸಿ, ನೆರವಿನ ಹಸ್ತ ಚಾಚಿದ್ದಾರೆ.

ಗಂಗಮ್ಮ ಅವರ ಕುಟುಂಬದ ಸಂಕಷ್ಟವನ್ನು ಆಲಿಸಿದ ವೀರೇಶ ಉಂಡಿ ಅವರು ಆರ್ಥಿಕ ನೆರವು ನೀಡುವುದರ ಜೊತೆಗೆ ಧೈರ್ಯ ತುಂಬಿ, ಮುಂದಿನ ದಿನಗಳಲ್ಲಿ ಎದುರಾಗುವ ಆರೋಗ್ಯ ಸಮಸ್ಯೆಗಳಿಗೂ ಅಗತ್ಯ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಸಂಕಷ್ಟದಲ್ಲಿರುವ ವೃದ್ಧೆಯ ಕಣ್ಣೀರಿಗೆ ಸ್ಪಂದಿಸಿ ಮಾನವೀಯತೆ ಮೆರೆದ ಅವರ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಗಂಗಮ್ಮ ಅವರಿಗೆ ಒಂದು ಕಿಡ್ನಿ ಇಲ್ಲ. ಬಲಗೈ ಮುರಿದಿದ್ದು, ವಯಸ್ಸಾದ ಪತಿಯ ಜವಾಬ್ದಾರಿಯೂ ಅವರ ಮೇಲಿದೆ. ಇನ್ನು ಮಗನೂ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿದ್ದು, ಕುಟುಂಬ ಜೀವನ ಸಾಗಿಸುವುದು ಗಂಗಮ್ಮ ಅವರಿಗೆ ಸವಾಲಾಗಿದೆ.

ಇನ್ನು ಗಂಗಮ್ಮ ಅವರ ಕಣ್ಣೀರಿನ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಭರತ್ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವೈರಲ್ ಆದ ವಿಡಿಯೋದಿಂದ ಗಂಗಮ್ಮ ಅವರ ಸಂಕಷ್ಟ ಬೆಳಕಿಗೆ ಬಂದಿದ್ದು, ಇದೀಗ ಅದೇ ಕಣ್ಣೀರಿಗೆ ನೆರವಿನ ಸ್ಪಂದನೆ ದೊರೆತಿದೆ.

ಒಬ್ಬರ ಕಣ್ಣೀರು ಮತ್ತೊಬ್ಬರ ಹೃದಯ ಮುಟ್ಟಿದಾಗ, ಮಾನವೀಯತೆ ಇನ್ನಷ್ಟು ಅರ್ಥಪೂರ್ಣವಾಗುತ್ತದೆ. ಗಂಗಮ್ಮಳ ಪಾಲಿಗೆ ವೀರೇಶ ಉಂಡಿ ಅವರ ಈ ನೆರವು ಕಷ್ಟದ ಸಮಯದಲ್ಲಿ ಭರವಸೆಯ ಬೆಳಕಾಗಿದೆ.


Share to all

You May Also Like

More From Author