ಲೇಟ್ ನೈಟ್ ಹುಬ್ಬಳ್ಳಿಯ ಹೊಟೆಲ್ ನಲ್ಲಿ ಪೋಲೀಸರನ್ನೇ ಅಟ್ಟಾಡಿಸಿ ಹೊಡೆದರಾ..ಪೋಲೀಸರಿಗೆ ಇದು ಬೇಕಿತ್ತು.‌

Share to all

ಲೇಟ್ ನೈಟ್ ಹುಬ್ಬಳ್ಳಿಯ ಹೊಟೆಲ್ ನಲ್ಲಿ ಪೋಲೀಸರನ್ನೇ ಅಟ್ಟಾಡಿಸಿ ಹೊಡೆದರಾ..ಪೋಲೀಸರಿಗೆ ಇದು ಬೇಕಿತ್ತು.‌

ಹುಬ್ಬಳ್ಳಿ:- ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಶ್ರೀ ನಿಧಿ ಹೊಟೆಲ್ ನಲ್ಲಿ ಲೇಟ್ ನೈಟ್ ಸರಾಯಿ ಗಮ್ಮತ್ತಿನಲ್ಲಿ ಕರ್ತವ್ಯ ನಿರತ ಮಹಿಳಾ ಪೋಲೀಸ ಪೇದೆ ಮೇಲೆ ಹುಡುಗಿಯೊಬ್ಬಳು ಅಟ್ಟಾಡಿಸಿ ಹೊಡೆದ ಘಟನೆ ತಡ ರಾತ್ರಿ ನಡೆದಿದೆ.

ಹಲ್ಲೆಗೊಳಗಾದ ಮಹಿಳಾ ಪೋಲೀಸ ಪೇದೆ ಮೀನಾಕ್ಷಿ ನಾಯಕರ ಎಂದು ಗುರುತಿಸಲಾಗಿದ್ದು ವಿದ್ಯಾನಗರ ಪೋಲೀಸ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಳು.ತಡ ರಾತ್ರಿ ಶ್ರೀನಿಧಿ ಹೊಟೆಲ್ ನಲ್ಲಿ ಗಲಾಟೆ ನಡೆಯುತ್ತಿದೆ ಎಂದು ಪೋನ್ ಬಂದ ಕೂಡಲೇ ಸ್ಥಳಕ್ಕೆ ಹೋದಾಗ ಘಟನೆ ನಡೆದಿದೆ ಎನ್ನಲಾಗಿದೆ.

ಪ್ರೇಮಿಗಳಿಬ್ಬರು ತಡ ರಾತ್ರಿ ಕುಡಿದ ಮತ್ತಿನಲ್ಲಿ‌ ಜಗಳವಾಡುತ್ತಿದ್ದಾಗ ಹೊಟೆಲ್ ಸಿಬ್ಬಂದ ಪೋಲೀಸರಿಗೆ ಪೋನ್ ಮಾಡತಾರೆ.ತಕ್ಷಣಕ್ಕೆ ಪೋಲೀಸರು ಬಂದು ಅವರ ಜಗಳ ಬಿಡಿಸಲು ಹೋದಾಗ ನಶೆಯಲ್ಲಿದ್ದ ಆ ಯುವತಿ ಹೊಟೆಲ್ ಸಿಬ್ಬಂದಿ ಸೇರಿ ಮಹಿಳಾ ಪೋಲೀಸರ ಮೇಲೂ ಹಲ್ಲೆ ನಡೆಸಿದ್ದಾಳೆ ಎನ್ನಲಾಗಿದೆ.

ಈಗಲಾದರೂ ಈ ವಿದ್ಯಾನಗರ ಪೋಲೀಸರಿಗೆ ಮಾನಾ..ಮರ್ಯಾದೆ ಅನ್ನೋದು ಇದ್ದರೆ ಹೊಟೆಲ್ ಗಳಲ್ಲಿ ತಡ ರಾತ್ರಿ ಸರಾಯಿ ಮಾರಾಟ ಬಂದ್ ಮಾಡಿಸಬೇಕು.ಇಲ್ಲಾ ಅಂದರೆ ಈಗ ಪೋಲೀಸರನ್ನಷ್ಠೇ ಹೊಡದಾರಾ ಮುಂದೆ ನಿಮಗೂ ಇದು ತಪ್ಪಿದ್ದಲ್ಲಾ..

ಈ ಹಿಂದೆಯೇ ಉದಯ ವಾರ್ತೆ ಶ್ರೀನಿಧಿ ಹೊಟೆಲ್ ನಲ್ಲಿ ಡೇ ಆ್ಯಂಡ್ ನೈಟ್ ಸರಾಯಿ ಸಪ್ಲೈ ಅಂತಾ ವರದಿ ಮಾಡಿತ್ತು.ಅಂದು ಹೊಟೆಲ್ ಮಾಲಿಕನಿಗೆ ಒಂದು ಕೆಪಿ ಆ್ಯಕ್ಟ್ ಕೊಟ್ಟು ಸುಮ್ಮನಾಗಿದ್ದರು..ಅಂದೇ ಅವರ ಮೇಲೆ ಸರಾಯಿಗೆ ಸಂಬಂಧಿಸಿದಂತೆ ಕಟ್ಟು ನಿಟ್ಟಿನ ಕ್ರಮ ಕೈಕೊಂಡಿದ್ದರೆ ಪೋಲೀಸರ ಮೇಲೆ ಹಲ್ಲೆ ಆಗತಿರಲಿಲ್ವೇನೋ…

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author