ಹಳೇ ದ್ವೇಷದ ಹಿನ್ನೆಲೆ ವ್ಯಕ್ತಿಯ ಮೇಲೆ ಹಲ್ಲೆ…ತೋಹೀದ್ ಸ್ವಲ್ಪದರಲ್ಲೇ ಬಚಾವ್..

Share to all

ಹಳೇ ದ್ವೇಷದ ಹಿನ್ನೆಲೆ ವ್ಯಕ್ತಿಯ ಮೇಲೆ ಹಲ್ಲೆ…ತೋಹೀದ್ ಸ್ವಲ್ಪದರಲ್ಲೇ ಬಚಾವ್..

ಹುಬ್ಬಳ್ಳಿ:- ಕಳೆದ ರಾತ್ರಿ ಹುಬ್ಬಳ್ಳಿಯ ಬೆಂಡಿಗೇರಿ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ಹಳೇದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿಯ ಯಲ್ಲಾಪುರ ಓಣಿಯ ಎಂಡಿ ಕಾಲೇಜ ಹತ್ತಿರ ಕಳೆದ ರಾತ್ರಿ ತೋಹೀದ್ ಮಿರ್ಜಾ ಅವನ ಮೇಲೆ ಅಪ್ತಾಬ್ ಮತ್ತು ವಶೀಮ್ ಸೇರಿ ಹಲವರು ಮಾರಕಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದ ತೋಹೀದ್ ಮಿರ್ಜಾ ಹೇಳಿದ್ದಾರೆ.

ಕಳೆದ ಒಂದು ವರ್ಷದ ಹಿಂದೆ ಹಲ್ಲೆಗೊಳಗಾದ ತೋಹೀದ್ ಮಿರ್ಜಾ ಅಪ್ತಾಬ್ ತಂಡದ ಮೇಲೆ ಜಗಳವಾಗಿತ್ತಂತೆ.ಅದೇ ಧ್ವೇಷ ಇಟ್ಟುಕೊಂಡು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.ಪ್ರಕರಣ ದಾಖಲಿಸಿಕೊಂಡಿರುವ ಬೆಂಡಿಗೇರಿ ಪೋಲೀಸರು ತನಿಖೆ ನಡೆಸಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author