PG ಯುವತಿಯ ಬರ್ಬರ ಹತ್ಯೆ ಕೇಸ್‌ʼಗೆ ಟ್ವಿಸ್ಟ್‌..! ಪ್ರಿಯತಮನಿಂದಲೇ ನಡೆಯಿತು ಘೋರ ಕೃತ್ಯ

Share to all

ಬೆಂಗಳೂರು: ಲೇಡಿಸ್‌ ಪಿಜಿಗೆ ನುಗ್ಗಿದ ವ್ಯಕ್ತಿಯೊಬ್ಬ ಯುವತಿಯನ್ನು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಬೆಚ್ಚಿ ಬೀಳಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಗೆ ಕೊಲೆಗಾರನ ಮಹತ್ವದ ಸುಳಿವು ಸಿಕ್ಕಿದೆ. ಹೌದು ಕೆಲಸ ಬಯಸಿ ಬೆಂಗಳೂರಿಗೆ ಬಂದು ಕೋರಮಂಗಲ ವ್ಯಾಪ್ತಿಯಲ್ಲಿ ಖಾಸಗಿ ಕಂಪನಿಯೊಂದ್ರಲ್ಲಿ ಜಾಬ್ ಮಾಡ್ತಿದ್ಲು..ಹತ್ತಿರವೇ ಪಿಜಿಯಲ್ಲಿ ವಾಸವಾಗಿದ್ಲು..

ಹೀಗೆ ಭವಿಷ್ಯದ ಬಗ್ಗೆ ಸುಂದರ ಸ್ವಪ್ನಗಳನ್ನ ಕಂಡಿದ್ದ ಯುವತಿ ಕೃತಿ, ಕುಟುಂಬವನ್ನು ಬಿಟ್ಟು ಒಂಟಿಯಾಗಿ ಲೇಡೀಸ್ ಪಿಜಿಯಲ್ಲಿ ವಾಸವಾಗಿದ್ಲು..ಆದ್ರೆ ನೆನ್ನೆ ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಕೃತಿ ಪಿಜಿಯೊಳಗೆ ಹೋಗಿದ್ದಾಳೆ..ಆಗ ಹಿಂದೆಯೇ ಹೋದ ಯುವಕನೊಬ್ಬ ಚಾಕುವಿಂದ ಆಕೆಯ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾನೆ..ಕೂಡಲೇ ಕೋರಮಂಗಲ ಪೊಲೀಸ್ರು ಸ್ಥಳಕ್ಕೆ ದೌಡಾಯಿಸಿದ್ದಾರೆ..

ಇನ್ನು ಪೊಲೀಸರ ತನಿಖೆಯಲ್ಲಿ ಕೃತಿ ಕುಮಾರಿ ಪ್ರೀತಿಸುತ್ತಿದ್ದ ಯುವಕನಿಂದಲೇ ಕೊಲೆ ಆಗಿರೋ ಶಂಕೆಯಿದೆ.. 11 ಗಂಟೆ ವೇಳೆಗೆ  ಕೃತಿ ಕುಮಾರಿಯೇ ಯುವಕನನ್ನ ಕರೆದೋಗಿರುವ ಮಾಹಿತಿ ಇದೆ..ಪಿಜಿ ಯಿಂದ ಹೊರ ಬಂದು ರಾತ್ರಿ ಊಟ ಮಾಡಿ ಇಬ್ಬರೂ ವಾಪಸ್ ಆಗಿದ್ದಾರೆ..ಈ ವೇಳೆ ಕೃತಿಕುಮಾರಿಯೇ ಆತನನ್ನ ಕರೆದೊಗಿರುವ ಸಿಸಿಟಿವಿ ಪೊಲೀಸರಿಗೆ ಲಭ್ಯವಾಗಿದ್ಯಂತೆ.. ನಂತರ ರೂಂ ನಲ್ಲಿ ಇಬ್ಬರ ಮಧ್ಯೆ ಗಲಾಟೆಯಾಗಿ ಕೊಲೆಯಾಗಿರುವ ಶಂಕೆಯಿದೆ..

ಹೀಗೆ ಮಾಹಿತಿ ತಿಳಿದ ಕೋರಮಂಗಲ ಪೊಲೀಸ್ರು ಸ್ಥಳದಲ್ಲೇ ಸಾವನ್ನಪ್ಪಿದ್ದ ಕೃತಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಂಬುಲೆನ್ಸ್ ನಲ್ಲಿ ರಾತ್ರಿಯೇ ಶಿಫ್ಟ್ ಮಾಡಿದ್ದಾರೆ..ಹೀಗಿರುವಾಗ್ಲೇ ಪಿಜಿಯಲ್ಲಿಯೇ ಯುವತಿ ಹತ್ಯೆ ವಿಚಾರ ತಿಳಿದು ಡಿಸಿಪಿ ಸಾರಾ ಫಾತಿಮಾ ಕೂಡಾ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ..ಹೀಗೆ ಏರಿಯಾದ ಸುತ್ತಲೂ ಸಿಸಿಟಿವಿಗಳನ್ನ ಸಂಗ್ರಹಿಸಿರೋ ಪೊಲೀಸ್ರು ಆರೋಪಿಗಾಗಿ ಹುಡುಕಾಟ ನಡೆಸ್ತಿದ್ದಾರೆ..


Share to all

You May Also Like

More From Author