ಸರ್ಕಾರಿ ಕೆಲಸ ಕೊಡಿಸುವುದಾಗಿ ಅತ್ಯಾಚಾರ: BJP ಮೇಯರ್ ವಿರುದ್ಧ ಮಹಿಳೆ ದೂರು!

Share to all

ಸರ್ಕಾರಿ ಕೆಲಸ ಕೊಡಿಸುವುದಾಗಿ ಅತ್ಯಾಚಾರ ಎಸಗಿದ ಆರೋಪದಡಿ BJP ಮೇಯರ್ ವಿರುದ್ಧ ಮಹಿಳೆಯೋರ್ವರು ದೂರು ನೀಡಿದ್ದಾರೆ.ದ್ವಾರಕಾಪುರಿ ಪೊಲೀಸ್ ಠಾಣೆಗೆ ಮಹಿಳೆ ದೂರು ನೀಡಿದ್ದು, ಆರೋಪಿ ಶಾನು ಅಲಿಯಾಸ್ ನಿತಿಶ್ ಶರ್ಮಾ ಎಂಬಾತ ಒಂದು ವರ್ಷ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿದ್ದಾರೆ.

ತನ್ನ ಮೇಲೆ 2023ರ ಮೇ 10 ರಿಂದ 2024ರ ಏಪ್ರಿಲ್ 16ವರೆಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿದ್ದಾರೆ. ಬ್ಯಾಂಕ್‌ನಲ್ಲಿ 1 ಲಕ್ಷ ರೂಪಾಯಿ ಸಾಲ ಹೊಂದಿರುವುದಾಗಿ ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ. ಅದನ್ನು ಮರುಪಾವತಿಸಲು ಕೌನ್ಸಿಲರ್ ಸಾನು ಒಂದು ಲಕ್ಷ ರೂಪಾಯಿ ನೀಡಿದ್ದರು. ಇದಾದ ನಂತರ ಅವರು ನನ್ನ ಗೆಳೆಯನೊಬ್ಬನಿಂದ ಅಂತರ ಕಾಯ್ದುಕೊಳ್ಳುವಂತೆ ಕೇಳಿಕೊಂಡರು. ನಾನು ನಿರಾಕರಿಸಿದಾಗ ಅವರು ಒಂದು ಲಕ್ಷ ರೂಪಾಯಿ ವಾಪಸ್ ಕೇಳಿದ್ದರು. ಇಂದೋರ್‌ನ ದ್ವಾರಕಾಪುರಿ (82) ವಾರ್ಡ್‌ನ ಬಿಜೆಪಿ ಕೌನ್ಸಿಲರ್ ಶಾನು ಶರ್ಮಾ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದಾರೆ.


Share to all

You May Also Like

More From Author