ಬೈಕ್ ಮೆಕ್ಯಾನಿಕ್ ಒಲಿದ ಅದೃಷ್ಟ: ಕೇರಳ ಲಾಟರಿಯಲ್ಲಿ ₹25 ಕೋಟಿ ಬಂಪರ್ ಬಹುಮಾನ!

Share to all

ಮಂಡ್ಯ: ಬೈಕ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಮಂಡ್ಯದ ಯುವಕ ರಾತ್ರೋ ರಾತ್ರಿ ಕೋಟ್ಯಾಧಿಪತಿ ಆಗಿದ್ದಾರೆ. ಹೌದು ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣ ನಿವಾಸಿಯಾದ ಅಲ್ತಾಫ್ ಪಾಷಾ, ಕೇರಳ‌ ರಾಜ್ಯದ ಲಾಟರಿಯಲ್ಲಿ 25 ಕೋಟಿ ರೂ. ಗೆದ್ದಬೀಗಿದ್ದಾರೆ. ವೃತ್ತಿಯಲ್ಲಿ ಬೈಕ್ ಮೆಕಾನಿಕ್ ಆಗಿರುವ ಅಲ್ತಾಫ್, ಇತ್ತೀಚಿಗಷ್ಟೆ ಕೇರಳಕ್ಕೆ ಹೋಗಿದ್ದಾಗ 500 ರೂ ಕೊಟ್ಟು ಲಾಟರಿ ಖರೀದಿ ಮಾಡಿದ್ದರು.

ಇದೀಗ 25 ಕೋಟಿ ರೂ. ಗೆದ್ದಿದ್ದಾರೆ. ಇನ್ನು ಬಹುಮಾನ ಬಂದಿರುವ ವಿಚಾರ ತಿಳಿಯುತ್ತಿದ್ದಂತೆ ಲಾಟರಿ ಹಣ ಪಡೆಯುವ ಪ್ರಕ್ರಿಯೆಗಾಗಿ ಅಲ್ತಾಫ್ ಕೇರಳಕ್ಕೆ ಪ್ರಯಾಣ ಬೆಳಸಿದ್ದಾರೆ. ಕೇರಳದ ಲಾಟರಿ ಭಾಗ್ಯದಲ್ಲಿ ಬಡ ಮೆಕ್ಯಾನಿಕ್ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದು, ಈ ಬಗ್ಗೆ ಆತನ ಸ್ನೇಹಿತರು ಸಂತಸ ವ್ಯಕ್ತಪಡಿಸಿದ್ದಾರೆ.


Share to all

You May Also Like

More From Author