ದಲಿತನ ವಿರುದ್ಧ ಸಿಡಿದೆದ್ದ ದಲಿತರು..ರೌಡೀ ಶೀಟರ್ ಗಡಿಪಾರಿಗೆ ಒತ್ತಾಯ.. ಜಿಲ್ಲಾಧಿಕಾರಿಗೆ ಮನವಿ.
ಧಾರವಾಡ:-ಅವನು ಕಲಘಟಗಿ ತಾಲೂಕಿನ ಶೀಗಿಗಟ್ಟಿ ತಾಂಡಾದ ನಿವಾಸಿಯಂತೆ.ಮೇಲಾಗಿ ರೌಡೀ ಶೀಟರ್ ಕೂಡಾ ಇದ್ದಾನಂತೆ ಅವನು ದಲಿತ ಅನ್ನೋ ಕಾರಣಕ್ಕೆ ವಿನಾಕಾರಣ ಅಲ್ಟ್ರಾಸಿಟಿ ಅನ್ನೋ ಕಾನೂನನ್ನು ಮುಂದಿಟ್ಟುಕೊಂಡು ಜನರನ್ನ ಹೆದರಿಸಿ ಹಣ ವಸೂಲಿ ಸೇರಿದಂತೆ ರೌಡೀಸಂ ಮಾಡುತ್ತಿದ್ದಾನಂತೆ.ಆ ಹಿನ್ನೆಲೆಯಲ್ಲಿ ಅವನನ್ನು ಕೂಡಲೇ ಧಾರವಾಡ ಜಿಲ್ಲೆಯಿಂದ ಗಡಿಪಾರು ಮಾಡುವಂತೆ ದಲಿತ ಸಂಘರ್ಷ ಸಮಿತಿ ಜಿಲ್ಲಾಧಿಕಾರಿಗಳಿಗೆ ಹಾಗೂ ಪೋಲೀಸ ವರಿಷ್ಢಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಅವನು ಕಲಘಟಗಿ ತಾಲೂಕಿನ ಶೀಗಟ್ಟಿ ತಾಂಡಾದ ಮಾರುತಿ ನಿಂಗಪ್ಪ ಲಮಾಣಿ ಅಂತಾ ಇವನ ವಿರುದ್ಧವೇ ಸಿಡಿದೆದ್ದಿರುವ ದಲಿತ ಸಂಘರ್ಷ ಸಮಿತಿ ದೊಂಬಿ..ಗಲಭೆ..ಶೋಷಿತರ ಮೇಲೆ ಅಲ್ಟ್ರಾಸಿಟಿ ಅಂತಾ ಹೆದರಿಸುತ್ತಾ ಬಂದಿದ್ದು ಅವನನ್ನು ಕೂಡಲೇ ಧಾರವಾಡ ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಮನವಿ ಸಲ್ಲಿಸಿದ್ದಾರೆ.