ಅಕ್ರಮ ಅನ್ನಭಾಗ್ಯ ಅಕ್ಕಿ ರೇಡ್…4 ಸಾವಿರ ಕ್ವಿಂಟಾಲ್ ಅಕ್ಕಿ ವಶ..ಅಯ್ಯಪ್ಪ ಸೇರಿ ಹಲವರ ಮೇಲೆ FIR.

Share to all

ಅಕ್ರಮ ಅನ್ನಭಾಗ್ಯ ಅಕ್ಕಿ ರೇಡ್…4 ಸಾವಿರ ಕ್ವಿಂಟಾಲ್ ಅಕ್ಕಿ ವಶ..ಅಯ್ಯಪ್ಪ ಸೇರಿ ಹಲವರ ಮೇಲೆ FIR.

ಯಾದಗಿರಿ:- ಯಾದಗಿರಿ ಜಿಲ್ಲೆಯ ಗುರುಮುಠಕಲ್ ಪಟ್ಟಣದ ಹೊರವಲಯದ ಎರಡು ರೈಸ್ ಮಿಲ್ ಗಳ ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಒಂದು ಕೋಟಿಗೂ ಅಧಿಕ ಮೊತ್ತದ ಪಡಿತರ ಅಕ್ಕಿ ವಶಪಡಿಸಿಕೊಂಡು ಹಲವರ ಮೇಲೆ ದೂರು ದಾಖಲಿಸಿದ್ದಾರೆ.

ಲಕ್ಷ್ಮೀ ವೆಂಕಟೇಶ ಹಾಗೂ ಲಕ್ಷ್ಮೀ ಬಾಲಾಜಿ ರೈಸ್ ಮಿಲ್ ಗಳ ಮೇಲೆ ದಾಳಿ ಮಾಡಿರುವ ಆಹಾರ ಇಲಾಖೆಯ ಉಪನಿರ್ಧೇಶಕ ಹಲವರ ವಿರುದ್ದ ಗುರುಮಠಕಲ್ ಪೋಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸತತ ಮೂರು ದಿನಗಳ ಕಾಲ ದಾಳಿ ನಡೆಸಿರುವ ಅಧಿಕಾರಿಗಳು ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಕುಟುಂಬಸ್ಥರು ಸೇರಿದಂತೆ ಹಲವರ ಮೇಲೆ ಎಪ್ಆಯ್ ಆರ್ ಮಾಡಲಾಗಿದೆ.

ಮಣಿಕಂಠ ತಂದೆ ನರೇಂದ್ರ ರಾಠೋಡ.ಸಹೋದರ ಅಯ್ಯಪ್ಪ ಹಾಗೂ ಚಂದ್ರಿಕಾ..ಲಕ್ಷ್ಮೀಬಾಯಿ ವಿರುದ್ಧ ಕೇಸ್ ದಾಖಲಾಗಿದೆ.ದೂರು ದಾಖಲಾಗುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದು ಆರೋಪಿಗಳ ಪತ್ತೆಗಾಗಿ ಪೋಲೀಸರು ಜಾಲ ಬೀಸಿದ್ದಾರೆ.

ಅಕ್ರಮ ದಂಧೆಕೋರರು ಮತ್ತೊಂದು ಮೆಗಾ ಪ್ಲ್ಯಾನ್ನನ್ನ
ಆಹಾರ ಇಲಾಖೆಯ ಅಧಿಕಾರಿಗಳು ರಿವೀಲ್ ಮಾಡಿದ್ದಾರೆ.

*ಅನ್ನಭಾಗ್ಯ ಅಕ್ಕಿ ಫಾರೀನ್ ಸಾಗಾಟಕ್ಕೆ ಪ್ಲ್ಯಾನ್*

ಬೇರೆ ಬೇರೆ ದೇಶಗಳಿಗೆ ಸಾಗಾಟ ಮಾಡ್ತಿದ್ದ ಜಾಲ ಪತ್ತೆ ಹಚ್ಚಿದ ಅಧಿಕಾರಿಗಳು.
ಪಾಲಿಶ್ ಮಾಡಿ ಸಿಂಗಾಪುರ, ದುಬೈ ಹಾಗೂ ಫ್ರಾನ್ಸ್ ಗೆ ಕಳುಹಿಸುತ್ತಿದ್ದ ಜಾಲ‌ ಬೆಳಕಿಗೆ ಬಂದಿದೆ.ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ತಂದು, ಅತ್ಯಾಧುನಿಕ ಯಂತ್ರಗಳಲ್ಲಿ ಪಾಲಿಶ್‌ ಮಾಡ್ತಿರುವ ದಂಧೆಕೋರರು.ರೈಸ್ ಮಿಲ್ ನಲ್ಲಿ ವಿವಿಧ ಬ್ರ್ಯಾಂಡ್ ನೇಮ್ ಹಾಕಿರುವ ಬ್ಯಾಗ್ ಗಳು ಪತ್ತೆಯಾಗಿವೆ.

ಡೈನಾಸ್ಟಿ, ವೊಲ್ಗಾ ಎಎಎ, ದಾರಾ ಡಬಲ್ ಸ್ಟಾರ್ ಬ್ರ್ಯಾಂಡ್ ನೇಮ್ ಸುಮಾರು 2 ಸಾವಿರ ಕ್ವಿಂಟಾಲ್ ನಷ್ಟು ವಿದೇಶಿ ಬ್ರ್ಯಾಂಡ್ ನೇಮ್ ಅಕ್ಕಿ ಪತ್ತೆಯಾಗಿವೆ.ವಿದೇಶಿ ಬ್ರ್ಯಾಂಡ್ ಗಳನ್ನು ನಕಲು ಮಾಡಿ ಮಾರಾಟ ಮಾಡುವ ಸಂಚು ಸಹ ನಡೆದಿತ್ತು ಎನ್ನಲಾಗಿದೆ.

ಉದಯ ವಾರ್ತೆ
ಯಾದಗಿರಿ


Share to all

You May Also Like

More From Author