ಅಕ್ರಮ ಅಕ್ಕಿ ಪ್ರಕರಣದಲ್ಲಿ ತುಟಿ ಪಿಟಕ್ ಅನ್ನದ ಇನಸ್ಪೆಕ್ಟರ್.. ಕಮೀಷನರ್ ಸಾಹೇಬ್ರ ಅಂತೂ……!

Share to all

ಅಕ್ರಮ ಅಕ್ಕಿ ಪ್ರಕರಣದಲ್ಲಿ ತುಟಿ ಪಿಟಕ್ ಅನ್ನದ ಇನಸ್ಪೆಕ್ಟರ್.. ಕಮೀಷನರ್ ಸಾಹೇಬ್ರ ಅಂತೂ……!

ಹುಬ್ಬಳ್ಳಿ:- ಹಳೇಹುಬ್ಬಳ್ಳಿ ಪೋಲೀಸ ಠಾಣೆಯಲ್ಲಿ ಅಕ್ರಮ ಅಕ್ಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿ ಹತ್ತೊಂಬತ್ತು ದಿನ ಕಳೆದರೂ ಇನಸ್ಪೆಕ್ಟರ್ ಸಾಹೇಬ್ರು ತುಟಿ ಪಿಟಕ್ ಅನ್ನತಾ ಇಲ್ಲಾ..ಕಮೀಷನರ್ ಸಾಹೇಬ್ರೂ ಆ ಪ್ರಕರಣದ ಬಗ್ಗೆ ಬ್ರೀಪ್ ಮಾಡತಾ ಇಲ್ಲಾ..

ಆ ಅಕ್ಕಿ ಪ್ರಕರಣದಲ್ಲಿ ಡ್ರೈವರ್ ಒಬ್ಬನನ್ನು ಸೇರಿಸಿ ಇನ್ನಿತರರು ಅಂತಾ ದೂರು ದಾಖಲಾಗಿದ್ದಷ್ಟೇ.ಇನ್ನಿತರರು ಅಂದರೆ ಯಾರು..? ಅವರನ್ನು ಯಾಕೆ ಇನ್ನೂ ವಿಚಾರಣೆ ಮಾಡಿಲ್ಲಾ ಅನ್ನೋದು ಹಲವು ಅನುಮಾನಗಳಿಗೆ ಪುಷ್ಟಿ ನೀಡತಾ ಇದೆ ಪೋಲೀಸರ ನಡೆ.

ಆ ಅಕ್ಕಿ ಪ್ರಕರಣದಲ್ಲಿ “MK”ನೇ ಕಿಂಗ್ ಪಿನ್ ಅಂತಾ ಗೊತ್ತಿದ್ದರೂ ಅವನ ಮೇಲೆ ಇನ್ನೂ ಯಾಕೆ ದೂರು ದಾಖಲಾಗಿಲ್ಲಾ.ಅನ್ನೋದು ಮಾತ್ರ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ..ಈ ಹಿಂದೆ ಕಸಬಾ ಪೋಲೀಸ ಠಾಣೆ ಮತ್ತು ಬೆಂಡಿಗೇರಿ ಪೋಲೀಸ ಠಾಣೆಯಲ್ಲಿ ಇಂತಹದೇ ದೂರು ದಾಖಲಾದರೆ ಒಂದಲ್ಲಾ..ಎರಡಲ್ಲಾ..ಮೂರು..ಮೂರು ತಂಡ ಮಾಡಿ ಹೊರ ರಾಜ್ಯದಲ್ಲೂ ಆರೋಪಿಗಳಿಗೆ ಇದೇ ಹುಬ್ಬಳ್ಳಿ ಪೋಲೀಸರು ಜನ್ಮ ಜಾಲಾಡಿದ್ದರು.

ಆದರೆ ಹಳೇಹುಬ್ಬಳ್ಳಿ ಪೋಲೀಸರು ಆರೋಪಿ ಮೂರು ಮೂರು ದಿನ ಪೋಲೀಸ ಠಾಣೆಗೆ ಬಂದೂ ಹೋಗಿ ಮಾಡಿದರೂ ಏನೂ ಮಾಡಿಲ್ಲಾ…ಮೂರು ದಿನ ಅವನ “ತಾರ” ಗಾಡಿ ಇಟ್ಟಕೊಂಡಿದ್ದೇ ಒಂದು ದೊಡ್ಡ ಸಾಹಸ ಅಂದುಕೊಂಡು,ಅದನ್ನು ಗಪ್ ಚುಪ್” ಮಂಗ ಮಾಯ ಮಾಡಿಬಿಟ್ಟರಾ..?

ಒಂದನೇ ಗಾಡಿ ಅಕ್ಕಿ ಪ್ರಕರಣದಲ್ಲಿ “MK”ಇನ್ನೂ ಇಲ್ಲಾ ಎರಡನೇ ಗಾಡಿ ಅಕ್ಕಿ ಪ್ರಕರಣದಲ್ಲಾದರೂ ಹಾವೇರಿಯ “ಪಿಸ್ತೂಲ ಬಾಬಾನ” ತರತಾರಾ ಇಲ್ಲಾ ಅಲ್ಲೂ “ಒಂದರಂಗ” ಮಾಡತಾರಾ ಕಾದು ನೋಡಬೇಕಾಗಿದೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author