ಗೆಳೆಯನ ಡ್ರಾಪ್ ಕೊಟ್ಟು..ಮನೆ ಮುಟ್ಟಲಿಲ್ಲಾ ಆಪ್ತ ಮಿತ್ರರು..ಮದ್ಯ ರಾತ್ರಿಯಲ್ಲಿ ರಸ್ತೆ ಮದ್ಯದಲ್ಲಿ ಹೆಣವಾದರು…

Share to all

ಗೆಳೆಯನ ಡ್ರಾಪ್ ಕೊಟ್ಟು..ಮನೆ ಮುಟ್ಟಲಿಲ್ಲಾ ಆಪ್ತ ಮಿತ್ರರು..ಮದ್ಯ ರಾತ್ರಿಯಲ್ಲಿ ರಸ್ತೆ ಮದ್ಯದಲ್ಲಿ ಹೆಣವಾದರು…

ಹುಬ್ಬಳ್ಳಿ:-ಹೌದು ನಿನ್ನೆ ಮದ್ಯ ರಾತ್ರಿ ನಡೆದ ಡೆಡ್ಲಿ ಎಕ್ಷಿಡೆಂಟ್ ನಲ್ಲಿ ಇಬ್ಬರು ಬಡ ಜೀವಿಗಳು ನಡು ರಸ್ತೆಯಲ್ಲಿಯೇ ರಕ್ತ ಸಿಕ್ತವಾಗಿ ಬೀದಿ ಹೆಣವಾಗಿದ್ದಾರೆ.ಅಷ್ಟಕ್ಕೂ ಅಲ್ಲಿ ನಡೆದಿರುವುದಾದರೂ ಎನೂ ಅಂತೀರಾ ಮೊದಲು ಈ ವಿಡಿಯೋ ನೋಡಿ….

ನಡು ರಸ್ತೆಯಲ್ಲಿ ವಿಲಿ ವಿಲಿ ಒದ್ದಾಡಿ ಜೀವ ಕಳೆದುಕೊಂಡ ಈ ಇಬ್ಬರ ಹೆಸರು ಫಯಾಜ್ ಮತ್ತು ಮೋಹಿದ್ ಅಂತಾ ಇವರ ವಯಸ್ಸು 26 ರ ಆಸುಪಾಸು.ಇವರು ಹುಬ್ಬಳ್ಳಿಯ ತಾಜ್ ನಗರದ ನಿವಾಸಿಗಳು.

ತಡ ರಾತ್ರಿ ತಮ್ಮ ಆಪ್ತ ಗೆಳೆಯನೊಬ್ಬನನ್ನು ಆನಂದ ನಗರಕ್ಕೆ ಡ್ರಾಪ್ ಕೊಟ್ಟು ವಾಪಸ್ಸು ಮನೆಗೆ ಹೋಗುವಾಗ ಗೋಕುಲ ರಸ್ತೆಯ ಅರ್ಬನ್ ಓಯಾಸಿಸ್ ಮಾಲ್ ಬಳಿ ಭೀಕರ ರಸ್ತೆ ಅಪಘಾತವಾಗಿ ಸಾವನ್ನಪ್ಪಿದ್ದಾರೆ.

ಈ ಇಬ್ಬರ ಸಾವಿಗೆ ಕೇಬಲ್ ಕಾರಣ ಎಂದು ಕುಟುಂಬಸ್ಥರ ಆರೋಪವಾಗಿದ್ದು ಸದ್ಯ ಗೋಕುಕ ರಸ್ತೆಯ ಪೋಲೀಸರು ಅಲ್ಲಿಯ ಸಿಸಿಟಿವಿ ಪುಟೇಜ್ ತೆಗೆದುಕೊಂಡು ತನಿಖೆ ನಡೆಸಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author