ಮ್ಯಾರೇಜ್ ಗೂ ಮುನ್ನ ಮಟಾಸ್ ಆದ ಕಾಂಗ್ರೆಸ್ ಮುಖಂಡ..ಗೆಳೆಯರಿಂದಲೇ ಮಡ್೯ರ್ ಆದ ಪೈರೋಜ್..
ಧಾರವಾಡ:- ನಿನ್ನೆ ಸಾಯಂಕಾಲ ಶಾಂತವಾಗಿದ್ದ ಧಾರವಾಡದ ಹಾಸ್ಮಿ ನಗರದಲ್ಲಿ ಗೆಳೆಯರಿಂದಲೇ ರಕ್ತ ಹರಿದಿದೆ.ಯೂಥ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದ ಪೈರೋಜ್ ನನ್ನು ಗೆಳೆಯರು ಪೈರೋಜ್ ಮನೆಯಲ್ಲಿಯೇ ಚಾಕುವಿನಿಂದ ಇರಿದು ಬರ್ಭರ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ನಾಲ್ಕೈದು ಜನ ಅರಾಮಾಗಿ ನಡೆದುಕೊಂಡು ಬಂದು ಮಾತನಾಡಿಸುತ್ತಾ ಪೈರೋಜನಿಗೆ ಚಾಕುವಿನಿಂದ ಇರಿದಿದ್ದಾರೆ.ಹಂಗೋ ಹಿಂಗೋ ಮಾಡಿ ತಪ್ಪಿಸಿಕೊಂಡು ಮನೆಯೊಳಗೆ ಓಡಿ ಹೋದರೂ ಬಿಡದ ದುಷ್ಕರ್ಮಿಗಳು ಬಾಗಿಲು ಮುರಿದು ಕೊಲೆ ಮಾಡಿದ್ದಾರೆ.ಅದೆಲ್ಲವೂ ಸಿಸಿ ಟಿವಿಯಲ್ಲಿ ರೆಕಾಡ್೯ ಆಗಿದೆ.
ಇದೇ ತಿಂಗಳು 24 ರಂದು ಪೈರೋಜನ ಮದುವೆ ಪಿಕ್ಸ್ ಆಗಿತ್ತು.ಮದುವೆ ಬ್ಯೂಸಿಯಲ್ಲಿದ್ದ ಪೈರೋಜನನ್ನು ಮಾತನಾಡಿಸುತ್ತಾ ಮಸಣಕ್ಕೆ ಕಳಿಸಿದ್ದಾರೆ ಪ್ರೆಂಡ್ಸ್…ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಉಪನಗರ ಪೋಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.