ವಿದ್ಯಾಕಾಶಿ ಧಾರವಾಡಕ್ಕೆ ಅಂಟಿದೆ ಜೈಲಿನ ನಂಟು..ವಿನಯ ಕುಲಕರ್ಣಿ ಆಯ್ತು…ಈಗ ಇಸ್ಮಾಯಲ್ ತಮಟಗಾರ ಸರತಿ…

Share to all

ವಿದ್ಯಾಕಾಶಿ ಧಾರವಾಡಕ್ಕೆ ಅಂಟಿದೆ ಜೈಲಿನ ನಂಟು..ವಿನಯ ಕುಲಕರ್ಣಿ ಆಯ್ತು…ಈಗ ಇಸ್ಮಾಯಲ್ ತಮಟಗಾರ ಸರತಿ…

ಧಾರವಾಡ:- ಬಿಜೆಪಿ ಮುಖಂಡ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ವಿನಯ ಕುಲಕರ್ಣಿ ಪ್ರಕರಣ ಒಂದು ಹಂತಕ್ಕೆ ಹೋದ ಬೆನ್ನಲ್ಲೆ,ಪೈರೋಜ ಕೊಲೆ ಪ್ರಕರಣದಲ್ಲಿ ಮತ್ತೊಬ್ಬ ಪ್ರಭಾವಿ ಕಾಂಗ್ರೆಸ್ ಮುಖಂಡ ಬಂಧನಕ್ಕೆ ಕ್ಷಣಗಣನೆ ಆರಂಭವಾಗಿದೆ.

ಈಗಾಗಲೇ ಧಾರವಾಡದ ಪೈರೋಜ್ ಕೊಲೆ ಪ್ರಕರಣದಲ್ಲಿ ಪೋಲೀಸರು ಹಲವರನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.ಇನ್ನೂ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ..ಇದೆಲ್ಲದರ ಮದ್ಯೆ ಪೈರೋಜ್ ಕೊಲೆ ಪ್ರಕರಣದಲ್ಲಿ ನಂಟು ಹೊಂದಿದ್ದಾರೆ ಎನ್ನಲಾದ ಕಾಂಗ್ರೆಸ್ ಮುಖಂಡ ಇಸ್ಮಾಯಲ್ ತಮಾಟಗಾರ ಅವರನ್ನು ಪೋಲೀಸರು ಹುಡುಕಲು ಆರಂಭಿಸಿದ್ದಾರೆ.

ಬಂಧನದ ಭೀತಿಯಲ್ಲಿರುವ ಕಾಂಗ್ರೆಸ್ ಮುಖಂಡ ಇಸ್ಮಾಯಲ್ ತಮಾಟಗಾರ ತಲೆಮರೆಸಿಕೊಂಡಿದ್ದಾರೆ.ಈ ಹಿನ್ನೆಲೆಯಲ್ಲಿ ಪೋಲೀಸರು ಇಂದು ಇಸ್ಮಾಯಿಲ್ ತಮಾಟಗಾರ ಮನೆ ಮತ್ತು ಅಂಜುಮನ್ ಸಂಸ್ಥೆಗಳಿಗೆ ಭೇಟಿ ನೀಡಿ ಸರ್ಚ್‌ ವಾರೆಂಟ್ ನೀಡಿದ್ದಾರೆ.

ಪೈರೋಜ್ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೋಲೀಸರು ನಾಳೆಯೊಳಗೆ ಕಾಂಗ್ರೆಸ್ ಮುಖಂಡ ಇಸ್ಮಾಯಲ್ ತಮಾಟಗಾರ ಅವರನ್ನು ಬಂಧಿಸಲೇಬೇಕೆಂದು ಹಲವು ತಂಡಗಳನ್ನು ರಚಿಸಿ ಬಲೆ ಬೀಸಿದ್ದಾರೆ.

ಉದಯ ವಾರ್ತೆ
ಧಾರವಾಡ.


Share to all

You May Also Like

More From Author