ಹುಬ್ಬಳ್ಳಿ ಕಿಮ್ಸ್ ವೈದ್ಯರ ನಿರ್ಲಕ್ಷ್ಯವಂತೆ.. ಯುವಕ ಸಾವು..ಕುಟುಂಬಸ್ಥರ ಗಂಭೀರ ಆರೋಪ.!
ಹುಬ್ಬಳ್ಳಿ:-ಬೈಕ್ ಅಪಘಾತದಲ್ಲಿ ಗಾಯಗೊಂಡು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಬಂದಿದ್ದ ಧಾರವಾಡ ತಾಲೂಕಿನ ಗೋವನಕೊಪ್ಪದ ಯುವಕ ಚಂದ್ರು ಒಕ್ಕುಂದ ಎಂಬ ಯುವಕ ಕಿಮ್ಸ್ ವೈದ್ಯರ ನಿರ್ಲಕ್ಷ್ಯದಿಂದಲೇ ಸಾವನ್ನಪ್ಪಿದ್ದಾನೆ ಎಂದು ಕುಟುಂಬಸ್ಥರು ವೈದ್ಯರ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ.
ಸಾವು ಬದುಕಿನ ನಡುವೆ ಹೋರಾಡುತ್ತಿರುವಾಗ ಚಿಕಿತ್ಸೆ ನೀಡೋದು ಬಿಟ್ಟು ಆಧಾರ ಕಾಡ್೯ ತನ್ನಿ,.ನೊಂದಣಿ ಮಾಡಿಸಿ ವಿನಾಕಾರಣ ಸಮಯ ಕಳೆದು ನಮ್ಮ ಹುಡುಗನ್ನ ಸಾಯೋ ಹಂಗ ಮಾಡಿದರು ಅಂತಾ ಕುಟುಂಬಸ್ಥರು ಕಿಮ್ಸ್ ವೈದ್ಯರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.ಅಲ್ಲದೆ ಕೆಲ ಘಂಟೆಗಳ ಕಾಲ ಪೋಲೀಸರೊಂದಿಗೆ ವಾಗ್ವಾದ ಮಾಡಿದ ಘಟನೆಯೂ ಕೂಡಾ ನಡೆಯಿತು.