ಕಾಂಗ್ರೆಸ್ ಸಮಾವೇಶದಲ್ಲಿ ಮಾರಾಮಾರಿ: ಶಾಸಕರುಗಳ‌ ನಡುವೆಯೇ ಕೈ ಕೈ ಮಿಲಾಯಸಿದ ಕಾರ್ಯಕರ್ತರು

Share to all

ಕೋಲಾರ: ಕೆಹೆಚ್ ಮುನಿಯಪ್ಪ ಹಾಗೂ ರಮೇಶ್ ಕುಮಾರ್ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು ಶಾಸಕರುಗಳ‌ ನಡುವೆಯೇ ಕೈ ಕೈ ಮಿಲಾಯಸಿಕೊಂಡಿರುವ ಘಟನೆ ಕೋಲಾರ ನಗರದ ಹೊರವಲಯದ ನಂದಿನಿ ಪ್ಯಾಲೇಸ್ ನಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ನಡೆದಿದೆ. ಸಮಾವೇಶ ಆತಂಭಕ್ಕೂ ಮೊದಲೇ ಶುರುವಾದ ಗಲಾಟೆಯಾಗಿದ್ದು, ಕಾಂಗ್ರೆಸ್ ಪಕ್ಷದ ವಿರುದ್ಧ ಕೆಲಸ ಮಾಡಿದವರನ್ನು ವೇದಿಕೆ ಮೇಲೆ ಕೂರಿಸಿದ್ದಾರೆ ಎಂದು ಗಲಾಟೆ ಶುರುವಾಗಿದೆ.

ಆರಂಭದಲ್ಲಿ ನಿರ್ಲಕ್ಷ್ಯ ಬಗ್ಗೆ ಕೆ.ಎಚ್.ಮುನಿಯಪ್ಪ ಬೆಂಬಲಿಗರು ಧ್ವನಿ ಎತ್ತಿದರು‌‌.  ನಂತರ ರಮೇಶ್ ಕುಮಾರ್ ಬೆಂಬಲಿಗರು ಅನ್ಯಾಯದ ಕೂಗು ಎಬ್ಬಿಸಿದರು‌. ರಮೇಶ್ ಕುಮಾರ್ ಅವರನ್ನು ಜಿಲ್ಲಾ ಕಾಂಗ್ರೆಸ್’ನಿಂದ ನಿರ್ಲಕ್ಷಿಸಲಾಗುತ್ತಿದೆ, ಬ್ಯಾನರ್’ನಲ್ಲಿ ಅವರ ಫೋಟೊ ಕೂಡ ಹಾಕಿಲ್ಲ ಎಂದು ಆಕ್ಷೇಪ ತೆಗೆದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಿನಾರಾಯಣ ಅವರನ್ನು ಆಚೆಗೆ ಕಳುಹಿಸಿದರು. ಆಗ ಮಾತಿನ ಚಕಮಕಿ ನಡೆದು ನೂಕಾಟ, ತಳ್ಳಾಟ ನಡೆಯಿತು. ಪೊಲೀಸರು ಮಧ್ಯ ಪ್ರವೇಶಿಸಿ ತಿಳಿಗೊಳಿಸಬೇಕಾಯಿತು.

 

 


Share to all

You May Also Like

More From Author