ಹುಬ್ಬಳ್ಳಿ ಉಪ ಕಾರಾಗೃಹ ದಲ್ಲಿ ರಾಜಾತೀಥ್ಯ ಪ್ರಕರಣ. ಉತ್ತರ ವಲಯ ಕಾರಾಗೃಹ ಡಿಐಜಿ ಟಿ ಪಿ ಶೇಷ ಹೇಳಿಕೆ.

Share to all

ಹುಬ್ಬಳ್ಳಿ ಉಪ ಕಾರಾಗೃಹ ದಲ್ಲಿ ರಾಜಾತೀಥ್ಯ ಪ್ರಕರಣ.
ಉತ್ತರ ವಲಯ ಕಾರಾಗೃಹ ಡಿಐಜಿ ಟಿ ಪಿ ಶೇಷ ಹೇಳಿಕೆ.

ಹುಬ್ಬಳ್ಳಿ:-ಹುಬ್ಬಳ್ಳಿ ಜೈಲಿನಲ್ಲಿ ಖೈದಿಗಳಿಗೆ ರಾಜಾದಿತ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಉತ್ತರ ವಲಯ ಕಾರಾಗೃಹ ಡಿಐಜಿ ಟಿ ಜಿ ಶೇಷ ಮಾತನಾಡಿ ವೈರಲ್ ವಿಡಿಯೋ ಪರಿಶೀಲನೆ ಮಾಡಿದ್ದೇವೆ.
ಕಳೆದ ಡಿಸೆಂಬರ್ 9 ರಂದು ನಡೆದ ಘಟನೆ ಇದಾಗಿದೆ ಎಂದಿದ್ದಾರೆ.

ಅಲ್ಲದೇ ಉದ್ದೇಶ ಪೂರ್ವಕ ಮಾಡಿದ ವಿಡಿಯೋ ಇದು
ನಾವು ಮಾಡಿದ ಜೈಲು ಸುಧಾರಣಾ ಕಾರ್ಯಕ್ರಮಕ್ಕೆ ನೆಗೆಟಿವ್ ಮಾಡುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ
ಹಿಂದೆ ಇರುವ ಗೋಡೆಯಿಂದ ಮೊಬೈಲ್ ಒಳಗೆ ಒಗೆದಿರಬಹುದು
ಅದು ಪೆನ್ ಕ್ಯಾಮರಾ ಸಹ ಆಗಿರಬಹುದು.

ನಮ್ಮ ಸಿಬ್ಬಂದಿ ಲೋಪ ದೋಷ ಇದೆ ಅವರ ಮೇಲೆ ಸಹ ಕ್ರಮ ಕೈಗೊಳ್ತೇವೆ.
ಪ್ರಕರಣಕ್ಕೆ ಸಂಬಂಧಿಸಿ 10 ಜನ ಆರೋಪಿಗಳ ಮೇಲೆ ಅಶೋಕ ನಗರ ಪೋಲೀಸ ಠಾಣೆಯಲ್ಲಿ ದೂರು ನೀಡಿದ್ದೇವೆ.

ಸಿಬ್ಬಂದಿಗಳ ಕೊರತೆ ಸಹ ಹುಬ್ಬಳ್ಳಿ ಉಪ ಕಾರಾಗೃಹದಲ್ಲಿದೆ. 80 ಜನ ಬೇಕು, ಆದ್ರೆ ಇಲ್ಲಿರೋದು 30 ಜನ ಗಾಂಜಾ ಅನ್ನೋದು ಪಕ್ಕಾ ಇಲ್ಲಾ, ಮರದ ಎಲೆ ಸಹಾಗಿರಬಹುದು.
ಈ ಬಗ್ಗೆ ತನಿಖೆ ನಂತರ ಅಸಲಿಯತ್ತು ಗೊತ್ತಾಗಲಿದೆ.

130 ಕ್ಕೂ ಹೆಚ್ಚಿನ ವಿಚಾರಣಾದೀನ ಖೈದಿಗಳು ಇಲ್ಲಿದ್ದಾರೆ.ಪ್ರಜ್ವಲ್ ಅನ್ನೋನು 2025 ರಲ್ಲಿ ಗಲಾಟೆ ಮಾಡಿಕೊಂಡಿದ್ದ
ಆತನನ್ನು ಜನವರಿ 16 ರಂದು ಬೇರೆ ಜೈಲಿಗೆ ಶಿಪ್ಟ್ ಮಾಡಲಾಗಿತ್ತು.ನಮ್ಮ ಇಲಾಖೆ, ಸಿಬ್ಬಂದಿಗೆ ಕೆಟ್ಟ ಹೆಸರು ತರಲು ಪ್ರಯತ್ನ ಮಾಡಿದ್ದಾನೆ.ಆತನೇ ವಿಡಿಯೋ ವೈರಲ್ ಮಾಡಿದ್ದಾನೆ ಅಂತ ಅನುಮಾನ ಇದೆ
ನಾವು ವಿಚಾರಣೆ ಮಾಡಿದಾಗ ಡಿಸೆಂಬರ್ ನಲ್ಲಿ ಮಾಡಿದ್ದು ಅಂತ ಗೊತ್ತಾಗಿದೆ.ಆರೋಪಿಗಳೇ ಈಗ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author