ಕುಂದಗೋಳದಲ್ಲಿ ಅನ್ನಭಾಗ್ಯ ಅಕ್ಕಿ ಅಕ್ರಮ ಪ್ರಕರಣ..ಪುಡ್ ಇನಸ್ಪೆಕ್ಟರ್ ಮೇಲೆ ದೂರು ದಾಖಲಿಸಿ SP ಗೆ ದೂರು.
ಹುಬ್ಬಳ್ಳಿ:-ಕುಂದಗೋಳದಲ್ಲಿ ನಡೆದಿರುವ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿ ಅಕ್ರಮ ಕಳ್ಳ ಸಾಗಾಟ ಮತ್ತು ದುರ್ಬಳಕೆಯ ಬಗ್ಗೆ ಕುಲಂಕಷವಾಗಿ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಆಮ್ ಆದ್ಮಿ ಪಾರ್ಟಿಯ (AAP) ಹಾಗೂ KRS ಪಕ್ಷದ ನಿಯೋಗವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ (SP) ಕಚೇರಿಯಲ್ಲಿ ಮಾನ್ಯ ಎಸ್ಪಿಯವರಿಗೆ ಮನವಿ ಸಲ್ಲಿಸಿತು.

ಬಡ ಜನರ ಹಸಿವು ನೀಗಿಸಲು ನೀಡಲಾಗುವ ಸರ್ಕಾರದ ಪಡಿತರ ಅಕ್ಕಿಯು ಅರ್ಹ ಫಲಾನುಭವಿಗಳಿಗೆ ತಲುಪದೆ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವುದು ಗಂಭೀರ ವಿಚಾರವಾಗಿದ್ದು, ಇದರ ಹಿಂದಿರುವ ಜಾಲವನ್ನು ಪತ್ತೆಹಚ್ಚಿ ನ್ಯಾಯಯುತ ತನಿಖೆ ನಡೆಸಬೇಕು ಎಂದು ನಿಯೋಗವು ಒತ್ತಾಯಿಸಿತು.
