ಕಸಬಾ ಠಾಣೆಯಲ್ಲಿ ಹಮಾರಾ..ಹಮಾರಾ…ತಲ್ವಾರನಲ್ಲಿ ಇನ್ಸ್ಪೆಕ್ಟರ್ ಗೆ ವಂಚಿಸಿದರಾ ಆ ಇಬ್ಬರು ಕಿಲಾಡಿ ಪೋಲೀಸರು…!

Share to all

ಕಸಬಾ ಠಾಣೆಯಲ್ಲಿ ಹಮಾರಾ..ಹಮಾರಾ…ತಲ್ವಾರನಲ್ಲಿ ಇನ್ಸ್ಪೆಕ್ಟರ್ ಗೆ ವಂಚಿಸಿದರಾ ಆ “ಇಬ್ಬರು” ಕಿಲಾಡಿ ಪೋಲೀಸರು…!

ಹುಬ್ಬಳ್ಳಿ:- ಕಳೆದ ನಾಲ್ಕು ದಿನಗಳ ಹಿಂದೆ ಕಸಬಾ ಪೋಲೀಸ ಠಾಣಾ ವ್ಯಾಪ್ತಿಯ ಗೌಸಿಯಾ ಟೌನ್ ದಲ್ಲಿ ಅಶೋಕ ಲೈಲ್ಯಾಂಡ್ ಗಾಡಿಯಲ್ಲಿ ಹದಿನೈದಕ್ಕೂ ಹೆಚ್ಚು ತಲ್ವಾರ ಸಿಕ್ಕ ಹಿನ್ನೆಲೆಯಲ್ಲಿ ರಾತ್ರಿ ಪಾಳೆಯ ಪೋಲೀಸ ಒಬ್ಬರು ಸ್ಟೇಷನ್ ಗೆ ಗಾಡಿ ತಂದು ತಮ್ಮ ಕರ್ತವ್ಯ ನೆರವೇರಿಸುತ್ತಾರೆ.

ನೈಟ್ ರೌಂಡ್ ಪೋಲೀಸ ಆಮ್ಸ್೯ ಆ್ಯಕ್ಟನಲ್ಲಿ ಗಾಡಿಯನ್ನು ತರತಾರೆ ಆದರೆ ಹಮಾರಾ…ಹಮಾರಾ ಇಬ್ಬರು ಪೋಲೀಸರು ಕಾಂಗ್ರೆಸ್ ಮುಖಂಡರೊಬ್ಬರ ಸಹಾಯದಿಂದ ಪೋನಿನಲ್ಲಿಯೇ ಡೀಲ್ ಮುಗಿಸಿ ಪೋಲೀಸ ಠಾಣೆಗೆ ತಂದ ಗಾಡಿಯನ್ನು ವಾಪಾಸ್ಸು ಕಳಿಸಿ ಬಿಡತಾರೆ ಅಂದರೆ ಪೋಲೀಸ ವ್ಯವಸ್ಥೆ ಎಲ್ಲಿಗೆ ಬಂದಿದೆ ನೋಡಿ.

ಅಷ್ಟೇ ಅಲ್ಲಾ ಡೀಲ್ ಮುಗಿದಿದ್ದೇ ಬೇರೇ..ಆದರೆ ಇನ್ಸ್ಪೆಕ್ಟರ್ ಗೆ ಹೇಳೆದ್ದೇ ಬೇರೆ ಅಂತೆ..! ಅಷ್ಟಕ್ಕೂ ಅದು ಇನ್ಸ್ಪೆಕ್ಟರ್ ಗಮನಕ್ಕಾದರೂ ಐತೋ ಇಲ್ವೋ ಗೊತ್ತಿಲ್ಲಾ..ಒಂದು ವೇಳೆ ಗೊತ್ತಿದ್ದರೂ ಮಾರಕಾಸ್ತ್ರಗಳು ಸಿಕ್ಕ ಪ್ರಕರಣಗಳಲ್ಲಿ ಸುಮ್ಮನಿರುವುದು ಯಾಕೆ..? ಅನ್ನೋ ಪ್ರಶ್ನೆ ಕಾಡುತ್ತೇ..

ಕಮೀಷನರ ಸಾಹೇಬ್ರೇ ನೀವು ಕ್ರೈಂ ಕಂಟ್ರೋಲ್ ಗೆ ಹಗಲಿರುಳು ಶ್ರಮಿಸುತ್ತಿದ್ದರೆ ನಿಮ್ಮ ಸಿಬ್ಬಂದಿಗಳು ಕಣ್ಣು ಮುಚ್ಚಿ ಹಾಲು ಕುಡಿದರೆ ಯಾರಿಗೂ ಗೊತ್ತೇ ಆಗಲ್ಲಾ ಅಂತಾ ತಿಳಿದಿದ್ದಾರೆ..ಇಂತಹ ಕಿಲಾಡಿ ಪೋಲೀಸರ ಬಗ್ಗೆ ಕ್ರಮಕೈಕೊಳ್ಳದಿದ್ದರೆ.ತಾನು ಕೆಡುವುದಲ್ಲದೇ ವ್ಯವಸ್ಥೆಗೆ ಮಸಿ ಬಳಿಯುತ್ತಾರೆ..

ಆ ಭಾಗದ ಆಗು ಹೋಗುಗಳ ಬಗ್ಗೆ ಇನ್ನೂ ಅಷ್ಟೊಂದು ತಿಳಿಯದ ಇನ್ಸ್ಪೆಕ್ಟರ್ ಸಾಹೇಬ್ರನ್ನೇ ವಂಚಿಸುವ ಕೆಲಸವನ್ನ ಅವರಿಬ್ಬರು ಮಾಡತಾ ಇದ್ದಾರೆ ಅಂತಾ ಇಡೀ ಠಾಣೆಯ ಗೋಡೆಗಳೇ ಮಾತಾಡ್ತಿವೆ…ಇನ್ಸ್ಪೆಕ್ಟರ್ ಅವರೇ ಈಗಲಾದರೂ ಅವರಿಬ್ಬರ ಬಗ್ಗೆ ಗಮನ ಹರಿಸದೇ ಇದ್ದರೇ ನಿಮ್ಮ ಮುಖಕ್ಕೂ ಮಸಿಬಳಿಯುತ್ತಾರೆ ಗೊತ್ತಿರಲಿ…

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author