ಬಸ್ ಸ್ಟೇರಿಂಗ್ ಕಟ್ಟ್…ಅಬ್ಬಾ ಉಳಿದೆವು ಅಂದ ಪ್ರಯಾಣಿಕರು..

Share to all

ಬಸ್ ಸ್ಟೇರಿಂಗ್ ಕಟ್ಟ್…ಅಬ್ಬಾ ಉಳಿದೆವು ಅಂದ ಪ್ರಯಾಣಿಕರು..

ಬೆಳಗಾವಿ:-ಮುನವಳ್ಳಿಯಿಂದ ಬಸರಿ ಕಡೆ ಪ್ರಯಾಣಿಸುತ್ತಿದ್ದ ಕೆಎಸ್ ಆರ್ ಟಿಸಿ ಬಸ್ಸಿನ ಸ್ಟೇರಿಂಗ್ ಕಟ್ಟಾಗಿ ಕಬ್ಬಿನ ಗದ್ದೆಗೆ ನುಗ್ಗಿದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಜಕ್ಕಬಾಳ ಗ್ರಾಮದ ಬಳಿ ನಡೆದಿದೆ.

ಮುನವಳ್ಳಿಯಿಂದ ಬಸರಿಗೆ ಕಡೆ ಹೊರಟಿದ್ದ ಬಸ್ಸಿನಲ್ಲಿ ಅರವತ್ತಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು.ಅದೃಷ್ಟವಶಾತ್ ಚಾಲಕನ ಜಾಗರೂಕತೆಯಿಂದ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಿಲ್ಲಾ..

ಬಸ್ಸು ಸ್ಟೇರಿಂಗ್ ಕಟ್ಟಾಗಿ ರಸ್ತೆ ಬದಿಯ ಕಬ್ಬಿನ ಗದ್ದೆಗೆ ನುಗ್ಗುವ ಮೊದಲ ವಿದ್ಯುತ್ ಸ್ಟಾನ್ಸ್ಪರ್ಮರ್ ಇದ್ದು ಅದನ್ನು ತಪ್ಪಿಸಲು ಚಾಲಕ ಹರಸಾಹಸ ಮಾಡಿದ್ದರ ಹಿನ್ನೆಲೆಯಲ್ಲಿ ಯಾರಿಗೂ ತೊಂದರೆ ಆಗಿಲ್ಲಾ…

ಉದಯ ವಾರ್ತೆ
ಬೆಳಗಾವಿ.


Share to all

You May Also Like

More From Author