ಪಾಲಿಕೆಯಿಂದ ಒಂದಲ್ಲ..ಎರಡಲ್ಲಾ..ಮೂರು ವರ್ಷದಿಂದ ಮೂರು ನೋಟೀಸ್…

Share to all

ಪಾಲಿಕೆಯಿಂದ ಒಂದಲ್ಲ..ಎರಡಲ್ಲಾ..ಮೂರು ವರ್ಷದಿಂದ ಮೂರು ನೋಟೀಸ್…

ಹುಬ್ಬಳ್ಳಿ:-ಹುಬ್ಬಳ್ಳಿಯಲ್ಲಿ ಪಾಲಿಕೆಯ ನೋಟೀಸಗಿಲ್ಲಾ,ಕವಡೆ ಕಾಸಿನ ಕಿಮ್ಮತ್ತು..ಒಂದಲ್ಲಾ..ಎರಡಲ್ಲಾ ಮೂರು ವರ್ಷದಿಂದ ನೊಟೀಸ್..ಮೂರು..ಮೂರು..ನೋ ರಿಸ್ಪಾನ್ಸ್..
ಈ ಹಿಂದೆ ಮಣಿವಣ್ಣನ್ನ ಕಮೀಷನರ ಇದ್ದಾಗ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯಿಂದ ನೋಟೀಸ್ ಬಂದಿದೆ ಅಂದರೆ ಸಾಕು ಅಕ್ರಮ ಕಟ್ಟಡಗಳ ಮಾಲಿಕರು ಗಡ..ಗಡ..ಅಂತಿದ್ದರು.ಅದೇ ಈಗ ಮರುಕಳಿಸಿದೆ..ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ನೋಟೀಸ್ ಬಂದರೆ, ಇರಲಿ ಬಿಡಿ ಅವರದೇನು ಅನ್ನೋ ಕಾಲ ಬದಲಾಗಿ ಮತ್ತೆ ಭಯದ ವಾತಾವರಣ ಆರಂಭವಾಗಿದೆ.

ಹುಬ್ಬಳ್ಳಿ ಗೋಕುಲ ರಸ್ತೆಯ ವಾಡ್೯ ನಂಬರ 30 ರ ವ್ಯಾಪ್ತಿಯಲ್ಲಿ ಬರುವ ಸೆಂಟ್ರಲ್ ಎಕ್ಸ್ಪ್ರೆಸ್ ಕಾಲೋನಿಯಲ್ಲಿರುವ ತಾರಾ ಎಮರಾಲ್ಡ್ ಹೊಟೆಲ್ ನಲ್ಲಿ ಅಕ್ರಮವಾಗಿ ನಾಲ್ಕನೇ ಮಹಡಿ ಕಟ್ಟಿರುವುದು.
ಈ ಅಕ್ರಮ ನಾಲ್ಕನೇ ಮಹಡಿ ಕಟ್ಟಿರುವ ಕುರಿತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನಗರ ಯೋಜನೆ 30-08-2023 ಕ್ಕೆ ಎರಡು ನೋಟೀಸ್ ಕೊಟ್ಟ ಸುಮ್ಮನಾಯ್ತು.ಅಂದರೆ ಅಲ್ಲಿ ಏನೋ ಸಮ್ಮತಿಂಗ್ ಆಗಿ ಮೂರನೇ ನೋಟೀಸ ಕೊಡಲೇ ಇಲ್ಲಾ..ಇದು ಅಂದಿನ ಪಾಲಿಕೆಯ ಆಡಳಿತಕ್ಕೆ ಹಿಡಿದ ಕೈಗನ್ನಡಿ.

ಈಗ ಮತ್ತೆ 2026 ರಲ್ಲಿ ಎರಡು ನೋಟೀಸ್ ಪಾಲಿಕೆಯಿಂದ ನೀಡಲಾಗಿದೆ..ಆದರೆ ಮುಂದೆ ಯಾವುದೇ ನೋಟೀಸ್ ಆಗಲಿ ಡೆಮಾಲಿಷನ್ ಪ್ರಕ್ರಿಯೆ ಆಗಲಿ ನಡೆದೆ ಇಲ್ಲಾ..ಈಗ ಖಡಕ್ ಕಮೀಷನರ್ ಡಾ:- ರುದ್ರೇಶ ಘಾಳಿ ಅವರು ಮುಂದಿನ ಕ್ರಮದ ಬಗ್ಗೆ ಕಣ್ಣು ಹಾಯಸತಾರಾ ಅನ್ನೋದನ್ನ ಕಾದು ನೋಡ ಬೇಕಾಗಿದೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author